ಹಳ್ಳಿಯ ವ್ಯಥೆ

Spread the love

ಸಾಹಿತ್ಯ – ಅಟ್ಟದ ಮೇಲಿನ ಸಜ್ಜವ ಕದಡಿರೆ ವರಲೆಯು ತುಂಬೀ ತುಳುಕುತಿದೆ। ಮರದಾ ಮೆಟ್ಟಿಲು ಹೆಜ್ಜೆಯ ತುಳಿತಕೆ ಸದ್ದನು ಮಾಡುತ ಉದುರುತಿದೆ॥ ನೆಂಟರ ಇಷ್ಟರ ಸೇವೆಯ ಮಾಡಿದ ಚಿಟ್ಟೆಯು ಮನದಲಿ ಉಳಿದಿಲ್ಲ। ಸುರಭಿಯ ಹಾಲನು ಕರೆದೂ ಕರೆದೂ ಕುಡಿದಾ ಬಟ್ಟಲ ಥಳುಕಿಲ್ಲ॥ ಮಾಸಿದ ಹೊಸಿಲಿನ ಎಳೆಯನು ತಿದ್ದಲು ಮನೆಯಲಿ ಹೆಣ್ಣಿನ ಕರವಿಲ್ಲ। ಅಂಗಳ ಗುಡಿಸುತ ಸಗಣಿಯ ಸಾರಿಸಿ ಹಾಕಿದ ಚುಕ್ಕಿಯ ನೆನಪಿಲ್ಲ॥ ಕಂಬವ ಸುತ್ತುವ ಆಟದಾ ಮಜವೇ ಚಿಣ್ಣರ ಬಳಿಗಿದು ಸುಳಿದಿಲ್ಲ। ನಗರವ ಅರಸೀ ಬಂದಿಹ ಮಂದಿಯ ಹಳ್ಳಿಯ ಸೊಗಡದು ತಿಳಿದಿಲ್ಲ॥ ಹಳ್ಳಿಯ ಹಾದಿಯ ಇಕ್ಕೆಲಗಳನ್ನು ಹಸಿರಿನ ತೆನೆಗಳು ಕಬಳಿಸಿದೆ। ಎಲ್ಲೆಯ ಮೀರಿದ ನಯನವು ಆಸರೆ ಕಾಣದೆ ಗಗನವ ನೋಡುತಿದೆ॥-ಧಾ3

ಗಾಯತ್ರಿ ನಾಗರಾಜ್ ರವರ ಸಂಗೀತ
ಗಾಯತ್ರಿ ನಾಗರಾಜ್ ರವರ ಸಂಗೀತ

ಗಾಯತ್ರಿ ನಾಗರಾಜ್ ಶೃಂಗೇರಿ ತಾಲೂಕಿನ ಕಿಗ್ಗ ಅವರ ಜನ್ಮಸ್ಥಳ. ನಾರ್ವೆಯ ಉಂಟುವಳ್ಳಿ ನಾಗರಾಜ್ ಜೋಯಿಸರ ಧರ್ಮಪತ್ನಿ. ಶೃಂಗೇರಿಯ ವಿದುಷಿ ಜಯಲಕ್ಷ್ಮಿ ಮಾಮಿ ಅವರ ಬಳಿ ಸೀನಿಯರ್ ಮುಗಿಸಿ ಕೊಪ್ಪದ ನಾದಬ್ರಹ್ಮ ಸಂಗೀತ ಶಾಲೆಯಲ್ಲಿ ವಿದ್ವಾನ್ ಶ್ರೀ ಮದ್ದೂರು ಗೋಪಾಲ್ ಅವರ ಬಳಿ ಪ್ರಿ ವಿದ್ವತ್ ಮುಗಿಸಿ ಪ್ರಸ್ತುತ ಅಂತಿಮ ವಿದ್ವತ್ ಸಂಗೀತಾಭ್ಯಾಸವನ್ನು ಶ್ರೀಯುತರ ಬಳಿಯಲ್ಲಿಯೇ ಮಾಡುತ್ತಿದ್ದಾರೆ.

ಧಾತ್ರಿ ಶ್ರೀಕಾಂತ್ ರವರ ಸಾಹಿತ್ಯ
ಧಾತ್ರಿ ಶ್ರೀಕಾಂತ್ ರವರ ಸಾಹಿತ್ಯ

ಇವರು ಹುಟ್ಟಿದ ಊರು ಚಿಕ್ಕಮಗಳೂರಿನ ಕೊಪ್ಪ ತಾಲೂಕು, ಮೆಟ್ಟಿದರು ಬೆಂಗಳೂರು. ಇವರು ಗೃಹಿಣಿ. ಇವರ ಇಷ್ಟದ ಹವ್ಯಾಸ ಮನಕೆ ತೋಚಿದ್ದನ್ನು ಪದಗಳಾಗಿ ಇಳಿಸಬಲ್ಲ ಚತುರೆ. ಇವರ ಹಲವು ಕವನ ಕಥೆ ಲೇಖನಗಳು ಕೆಲವು ಪತ್ರಿಕೆಗಳಲ್ಲಿ ಹಾಗೂ ಜಾಲತಾಣಗಳಲ್ಲಿ ಪ್ರಕಟವಾಗಿವೆ. ಸಾಹಿತ್ಯ ಕ್ಷೇತ್ರದಲ್ಲಿ ಹೆಚ್ಚಿನ ಮಾಹಿತಿ ಕಲೆ ಹಾಕಿ ಇನ್ನೂ ಕಥೆ-ಕವನಗಳನ್ನು ಬರೆಯಬೇಕೆಂಬ ಬಯಕೆ ಇವರದು.

About the author

kavyakaaranji

View all posts

Leave a Reply

Your email address will not be published. Required fields are marked *