ಶ್ರೀನಿಧಿ ಎಂ ಕೆಯವರ ಮನಸಿಗೇತಕೇ ಮುಪ್ಪು/ ಮನೆದಪ್ಪಿದಾ ಜೀವಗಳು ಧಾತ್ರಿ ಶ್ರೀಕಾಂತ್ ರವರ ಸಾಹಿತ್ಯ

Spread the love

ಶ್ರೀನಿಧಿ ಎಂ ಕೆ ಶ್ರೀಯುತ ಶ್ರೀನಿಧಿಯವರು ಕೊಪ್ಪ ನಾದಬ್ರಹ್ಮ ಸಂಗೀತ ಶಾಲೆಯ ಪ್ರಾಂಶುಪಾಲರು! ಧಾತ್ರಿ ಶ್ರೀಕಾಂತ್ ರವರ ಸಾಹಿತ್ಯ ಇವರು ಹುಟ್ಟಿದ ಊರು ಚಿಕ್ಕಮಗಳೂರಿನ ಕೊಪ್ಪ ತಾಲೂಕು, ಮೆಟ್ಟಿದರು ಬೆಂಗಳೂರು. ಇವರು ಗೃಹಿಣಿ. ಇವರ ಇಷ್ಟದ ಹವ್ಯಾಸ ಮನಕೆ ತೋಚಿದ್ದನ್ನು ಪದಗಳಾಗಿ ಇಳಿಸಬಲ್ಲ ಚತುರೆ. ಇವರ ಹಲವು ಕವನ ಕಥೆ ಲೇಖನಗಳು ಕೆಲವು ಪತ್ರಿಕೆಗಳಲ್ಲಿ ಹಾಗೂ ಜಾಲತಾಣಗಳಲ್ಲಿ ಪ್ರಕಟವಾಗಿವೆ. ಸಾಹಿತ್ಯ ಕ್ಷೇತ್ರದಲ್ಲಿ ಹೆಚ್ಚಿನ ಮಾಹಿತಿ ಕಲೆ ಹಾಕಿ ಇನ್ನೂ ಕಥೆ-ಕವನಗಳನ್ನು ಬರೆಯಬೇಕೆಂಬ ಬಯಕೆ ಇವರದು.

ಸಾಹಿತ್ಯ –
ಮನಸಿಗೇತಕೇ ಮುಪ್ಪು
ನಿನ್ನ ಮನಸಿಗೇತಕೇ ಮುಪ್ಪು?।
ಹಂಬಲಿಸುತಿಹುದು ನಿನಗಾಗಿ
ಮುಪ್ಪಾದ ದೇಹವಾ ನೀನೊಪ್ಪು!॥ಪ॥

ಕುರ್ಚಿಯೊಂದು ಕೊರಗಿ ಕೊರಗೀ
ತೂಗಿಕೊಳ್ಳುತ್ತಿದೆ ತನ್ನಷ್ಟಕ್ಕೆ।
ಮನೆಯ ಮಾಳಿಗೆಯು ತಲುಪಿದೆ
ಮುರಿದು ಬೀಳುವಾ ಹಂತಕ್ಕೆ॥

ಕೈತೊಳೆಯ ಬೇಕಿದೆ ಹೆಂಚಿನ ತುದಿಯಲ್ಲಿ
ಜಾರಿದ ಮಳೆ ಹನಿಯಿಂದ।
ನಡೆಯುವ ಹಾದಿಯೂ ಬರುಡಾಗಿ
ತುಂಬಿದೆ ಒಣಹುಲ್ಲುಗಳಿಂದ॥

ಹಣ್ಣುಗಳ ತುಂಬಿದಾ ಮಾಮರವು
ಕೊಳೆತು ರೋದಿಸುತಿದೆ ಕೀಳುವರಿಲ್ಲದೇ।
ಮಲ್ಲಿಗೆಯ ಘಮಲಿನಾ ಅಂಗಳವು
ಒಣಗಿ ಹೋಗಿದೇ ನೀರೆರೆಯುವವರಿಲ್ಲದೇ॥

ಪಾತ್ರೆಗಳ ತಿಕ್ಕುವವರಿಲ್ಲ,
ಕೈಬಳೆಗಳ ಸದ್ದಿಲ್ಲ ಅಡುಗೆಮನೆಯಲೀ।
ಗಾಳಿ ಬೀಸುತಾ ಆಡುತ್ತಿದ್ದ
ಮೊಮ್ಮಕ್ಕಳಿಹರೀಗ ದೂರದೂರಿನಲಿ॥

ಕಾಣದ ಕಂದನಾ ನೆರಳನೂ
ಬಯಸುತಿಹ ಧೇನುವಿನಾ ಆಕ್ರಂದನವಿಲ್ಲಿ
ಕರುಳ ಬಳ್ಳಿಯು ಬರುವ ಕನಸ ಕಾಣುತಾ ನಕ್ಷತ್ರಗಳ ಎಣಿಸುವಾ ವಾರ್ಧಕ್ಯವಿಲ್ಲಿ॥

ತೊರೆಯುತಿಹರು ಮನ-ಮನೆಯಾ
ಗೂಡನು ಕಟ್ಟುತಾ ಪಟ್ಟಣದಲೀ।
ಮಿಸುಕಾಡುತಿರುವ ಹಿರಿಯ ಜೀವಗಳಾ
ಮರೆತು ಬಾಳುತಿಹರು ಕಲ್ಲು ಮನಸಿನಲೀ॥-ಧಾ3
-ಧಾತ್ರೀ ಶ್ರೀಕಾಂತ್

Please subscribe – https://www.youtube.com/channel/UCK0Y3zLEMP7gzjnk9dfPgOg

About the author

kavyakaaranji

View all posts

Leave a Reply

Your email address will not be published. Required fields are marked *