ಕಣ್ಣು
ಜಗದ ಸೃಷ್ಟಿಯ
ನೋಡಲು
ಮೊಗದಿ ದೃಷ್ಟಿಯಾದೆ!
ಬದುಕಿನ
ಕತ್ತಲು ನೀಗಲು
ಬೆಳಕು ನೀನಾದೆ!
ನೀ….
ನೋಡಿದುದೆಲ್ಲ ಸತ್ಯವಲ್ಲ!
ನೋಡದಿರುವುದೆಲ್ಲ
ಮಿಥ್ಯವಲ್ಲ!
ನೀನಿದ್ದರೇ ಬೆಳಕು
ನಿನ್ನಂದವೇ ಹೊಳಪು!
ದಾರಿಗೂ ನೀನಾದೆ
ದಾನಕೂ ನೀನಾದೆ!
ನೀನೆಂದೂ ಬಾಡದಿರು
ಅಂಧಕಾರವ ಸೂಸದಿರು!
……ಟಿ ವಿ ಎಸ್😊
ಸಂತಸದ ಬುಗ್ಗೆ ಭಾವಕಾರಂಜಿ 🌹