ಗೀತಾ ಬಾಲಸುಬ್ರಹ್ಮಣ್ಯ ಅವರ ಮಳೆ ಬಂತು ಹೇಗೆ ಗೊತ್ತುಂಟ ನಿಮಗೆ ಹಾಡು/ರಚನೆ-ಡಿ ನಂಜುಂಡ

Spread the love

ಗೀತಾ ಸುಬ್ರಹ್ಮಣ್ಯರವರು ಈ ಕವಿತೆಗೆ ಒಳ್ಳೆಯ ರಾಗ ಹಾಕಿ ಭಾವಪೂರ್ಣವಾಗಿಸಿದ್ದಾರೆ. ಚತುರಶ್ರ ಲಯದ ಒಂದು ಪ್ರಭೇದವಾದ “ಮಧ್ಯಾವರ್ತಲಯ” ದಲ್ಲಿ ಬರೆ್ ಕವಿತೆ ಇದು. 2/3/3/2/3/3 2/3/3/3 2/3/3/2/3/3 2/3/3/3 ಮಾತ್ರೆಗಳ ಗತಿಯಲ್ಲಿ ಇದರ ಲಯ. ಬೇಂದ್ರೆಯವರ “ಬಂಗಾರ ನೀರ ಕಡಲಾಚೆ ದೂರ”…… ಪದ್ಯವೂ ಇದೇ ಲಯದಲ್ಲಿರುವುದು. -ಡಿ ನಂಜುಂಡ

https://www.youtube.com/channel/UCK0Y3zLEMP7gzjnk9dfPgOg

ಸಾಹಿತ್ಯ/Lyrics –

ಮಳೆ ಬಂತು ಹೇಗೆ ಗೊತ್ತುಂಟ ನಿಮಗೆ?
ಹೇಳಲಿಕೆ ಬರದು ನನಗೆ
ಬಾನಿನಲಿ ನೀರೆ ಮಾತಾಡುತಿರಲು
ಕಾಲ್ಜಾರಿ ಬಿದ್ದ ಹಾಗೆ

ಒಂದೆ ಸಲಕೆಲ್ಲ ಕಿರುಚಾಡುವಂತೆ
ಕಿಕ್ಕಿರಿದ ಸಂತೆಯೊಳಗೆ
ಒಂಚೂರು ಅರ್ಥವಾಗದಿಹ ಪಾಠ
ಏರ್ದನಿಯಲಿದ್ದ ಹಾಗೆ

ಹಪ್ಪಳದ ಡಬ್ಬ ಕೆಳಗಿಳಿವ ಸದ್ದು
ನೆರೆಹೊರೆಗೆ ಕೇಳದಂತೆ
ಕರಿಯುತಿಹ ಘಮವು ಹೊರಹೋಗದಿರಲು
ಮುಚ್ಚಳವ ಹಾಕಿದಂತೆ

ನೀರಿನಲೆ ತಡೆಯು ನೀರೆಲ್ಲ ಕಡೆಯು
ಇಳಿಬಿಟ್ಟ ಗಂಗೆ ಜಡೆಯೆ?
ಮಡೆಹೊಡೆಯುತಿರುವ ತರಗೆಲೆಗಳಂತೆ
ಎದೆಬಿರಿದು ನೆಗೆದ ನುಡಿಯೆ?

ಡಿ ನಂಜುಂಡ

About the author

kavyakaaranji

View all posts

Leave a Reply

Your email address will not be published. Required fields are marked *