ಅಕ್ಷಯ ಪಾತ್ರೆ – ಅರವಿಂದ ಸಿಗದಾಳ್/ಎಂ.ಕೆ.ಶ್ರೀನಿಧಿ. ಕೊಪ್ಪ.

Spread the love

ಕಾವ್ಯವಾಚನ ಅಕ್ಷಯ ಪಾತ್ರೆ ಕುಮಾರವ್ಯಾಸ ಕರ್ಣಾಟ ಭಾರತ ಕಥಾಮಂಜರಿ ಎಂ.ಕೆ.ಶ್ರೀನಿಧಿ. ಕೊಪ್ಪ. ಅರವಿಂದ ಸಿಗದಾಳ್

ದೂರ್ವಾಸರು ದುರ್ಯೋಧನನ ಅರಮನೆಗೆ ಬಂದು ಊಟ ಮಾಡಿ ಸಂತೃಪ್ತರಾಗಿ “ಏನು ಬೇಕು ಕೇಳು ಅನುಗ್ರಹಿಸುತ್ತೇನೆ” ಅಂತಾರೆ.

ಸಿಟ್ಟು ಬಂದರೆ ಮೂರು ಲೋಕವನ್ನೂ ಸುಟ್ಟು ಭಸ್ಮ ಮಾಡಿ ಆ ಭಸ್ಮವನ್ನು ಹಣೆಗೆ ವಿಭೂತಿಯಾಗಿ ಧರಿಸಲೂ ಬಲ್ಲವರು ಅವರು!!. ದೇವೇಂದ್ರನ ಒಂದು ಸಣ್ಣ ತಪ್ಪಿಗೆ ಇಡೀ ಸ್ವರ್ಗವನ್ನೇ ಸಮುದ್ರದ ಪಾಲಾಗಲಿ ಎಂದು ಶಪಿಸಿ ಸ್ವರ್ಗವನ್ನೇ ಸರ್ವನಾಶ ಮಾಡಿದವರು. ಅಂತಹ ದೂರ್ವಾಸರು ಏನು ಬೇಕು ಅಂದಾಗ ದುರ್ಯೋಧನ ಏನು ಬೇಕಾದರೂ ಕೇಳಬಹುದಿತ್ತು!!

“ಒಂದು ಸಹಸ್ರ ವರ್ಷಗಳ ಕಾಲ ಈ ಹಸ್ತಿನಾಪುರದ ಆಡಳಿತವನ್ನು ಸಕಲ ಸುಖ ಸಂಪತ್ತಿನೊಂದಿಗೆ, ಸಕಲ ಸಮೃದ್ಧಿಯೊಂದಿಗೆ, ಅಜಾತ ಶತ್ರುವಾಗಿ ಈ ದುರ್ಯೋಧನ ನಡೆಸುವಂತಾಗಲಿ” ಅಂತ ಒಂದು ಮಾತು, ಒಂದು ಮಾತು ಕೇಳಿದ್ರೆ ಸಾಕಿತ್ತು!!

ದೂರ್ವಾಸರು “ತಥಾಸ್ತು” ಅನ್ನುವುದಕ್ಕೆ ಸಿದ್ದರಾಗಿ ನಿಂತಿದ್ರು!!

ಆದರೆ…

ಆದರೆ ದುರ್ಯೋಧನ ಕೇಳಿದ್ದೇನು……?

**

ಬನ್ನಿ ಹಸ್ತಿನಾಪುರದವರೆಗೆ ಹೋಗಿ, ದುರ್ಯೋಧನ ಏನು ಕೇಳಿದ ಅಂತ ನೋಡಿ, ಅಲ್ಲಿಂದ ಯಮುನಾ ನದಿಯ ದಡದವರೆಗೆ ಬಂದು ಧೌಮ್ಯರ ಆಶ್ರಮದಲ್ಲಿ ಪಾಂಡವರನ್ನು ಬೇಟಿಮಾಡಿ, ಒಂದು ಊಟ ಮಾಡಿ ಬರುವಾ!!

ಹಾಂ, ಸಂಜೆ ಸೂರ್ಯಾಸ್ತದ ನಂತರ ಅಲ್ಲಿ ಊಟ ಸಿಗುದಿಲ್ಲ, ಲಾಕ್ಡೌನ್ ಇದೆ, ಮುಂಚೆಯೇ ಹೋಗಿ ಬರಬೇಕು.

ಹೋಗುವುದು ಸುಲಭ!!

ಕೊಪ್ಪ ಶ್ರೀನಿಧಿಯವರು ಕುಮಾರವ್ಯಾಸನ ಪದ್ಯಗಳನ್ನು ಹೇಳ್ತ ಅಲ್ಲಿಗೆ ಕರ್ಕೊಂಡು ಹೋಗ್ತಾರೆ!! ಅವರ ಜೊತೆಯಲ್ಲಿ ಸಹಾಯಕನಾಗಿ ನಾನೂ ಇರ್ತೇನೆ!!

ನೀವು ಬರೋದಾದ್ರೆ ನಲವತ್ತೈದು ನಿಮಿಷ ಬಿಡುವು ಮಾಡ್ಕಳಿ!! ಯೂಟೂಬ್ ಬುಲೆಟ್ ಟ್ರೈನ್‌ನಲ್ಲಿ ಹೋಗಿಬರುವ.

ಜಸ್ಟ್ ಕೆಳಗಿನ ಲಿಂಕ್ ಒತ್ತಿ

About the author

kavyakaaranji

View all posts

Leave a Reply

Your email address will not be published. Required fields are marked *