Spread the love

ನಾಲ್ಕು ಬೆರಳುಗಳ ಪಾದ
ಕಪ್ಪು ಬಣ್ಣವು ಚರಣ!
ಮನ ಮುಟ್ಟುವ ಮಾಟ
ಕಣ್ಸೆಳೆಯುವ ಆ ನಿನ್ನ ನೋಟ!

ವಸಂತ ಕಳೆದ ವರ್ಷ ಋತುವಿದು
ಮಾಮರದ ಮುನಿಸು
ಪಲ್ಲವಿಸದು ಅದು!

ನೀಲ ವಸ್ತ್ರ ನಿನ್ನ
ಮೈ ಹೊದಿಕೆ
ಒಂಟಿಯಾಗಿ
ಕುಳಿತೆಯೇಕೆ!?

ಇಂಪಿನಲಿ ಉಲಿಯುವ ಕೂಗು
ಮರೆಯಲ್ಲಿ ನಿನ್ನ ಆ ಮೂಗು!
ನಾ ಚಂದ ಅನ್ನುವ ನನ್ನ ಅಂಗ
ನಿನ್ನ ಮುಂದೆ ಎಲ್ಲವೂ
ಭಂಗ!
ಟಿ .ವಿ .ಎಸ್

ಟಿವಿ ಶ್ರೀಮತಿ
ಟಿವಿ ಶ್ರೀಮತಿ

ಇವರು ಚಿಕ್ಕಮಗಳೂರು ಜಿಲ್ಲೆ ಕೊಪ್ಪ ನಿವಾಸಿ, ಗೃಹಿಣಿಯಾಗಿರುವ ಇವರು ಕವಿತೆ ಕಥೆ ಲೇಖನ ಇವುಗಳ ರಚನೆಯಲ್ಲಿ ತೊಡಗಿಕೊಂಡಿರುತ್ತಾರೆ ನರ ಪುಂಗವ ಭಕ್ತಿ ಮಂಜೂಷ ಇವರ ಕೃತಿಗಳು ಇವರ ಭಾವಗೀತೆಯ ಬಾವ ತರಂಗಿಣಿ ಧ್ವನಿಸುರಳಿ ಕೂಡ ಬಿಡುಗಡೆಯಾಗಿದೆ

About the author

kavyakaaranji

View all posts

Leave a Reply

Your email address will not be published. Required fields are marked *