ಬಿಂಕವಿಲ್ಲದ ಬಿಂದಿಗೆ ಬಾಲೆ

Spread the love

ಬಿಂಕವಿಲ್ಲದ ಬಿಂದಿಗೆ ಬಾಲೆ

ಕಂಡದ್ದೆಲ್ಲ ಬರೀ ಬೆಲ್ಲವಾಗಿರುವಾಗ
ಚಿಂತೆಯ ಸಂತೆಯೇ ಇವಳಿಗಿಲ್ಲ।
ಮುಗ್ಧತೆಯ ಅಂದವೇ ಹೆಚ್ಚಿರುವಾಗ
ಲೌಕಿಕ ಆಡಂಬರವೇ ಬೇಕಿಲ್ಲ॥

ತಾನಿರುವುದೇ ಹೀಗೆಂದು
ನಗುವಿನಲ್ಲೇ ತೋರಿಸಿಹಳಲ್ಲ।
ಕೊಂಕು ಬಿಂಕದ ಗಂಧಗಾಳಿಯೇ
ಇವಳತ್ತ ಸುಳಿದಿಲ್ಲ॥

ನೊಳಕು ಬಿಂದಿಗೆಯ ಹೊತ್ತರೂ
ಧನಕನಕ ಹೊತ್ತಿರುವಂತಿಹಳಲ್ಲ।
ಕೊಳಕು ವಸ್ತ್ರವ ಧರಿಸಿದರೂ
ನವವಿನ್ಯಾಸ ತನ್ನಲ್ಲಿದೆಯೆಂದಿಹಳಲ್ಲ॥

ಇವಳ ಆತ್ಮವಿಶ್ವಾಸಕೆ
ಕೊರತೆಯಂತೂ ಇಲ್ಲವೇ ಇಲ್ಲ।
ಏನೂ ತಿಳಿಯದ,
ಎಲ್ಲವನ್ನೂ ಅರಿತ ಮುಗ್ಧ ಜೀವ
ಇವಳೇ ಎಲ್ಲ॥

ಧಾತ್ರಿ ಶ್ರೀಕಾಂತ್
ಧಾತ್ರಿ ಶ್ರೀಕಾಂತ್

ಇವರು ಹುಟ್ಟಿದ ಊರು ಚಿಕ್ಕಮಗಳೂರಿನ ಕೊಪ್ಪ ತಾಲೂಕು, ಮೆಟ್ಟಿದರು ಬೆಂಗಳೂರು. ಇವರು ಗೃಹಿಣಿ. ಇವರ ಇಷ್ಟದ ಹವ್ಯಾಸ ಮನಕೆ ತೋಚಿದ್ದನ್ನು ಪದಗಳಾಗಿ ಇಳಿಸಬಲ್ಲ ಚತುರೆ. ಇವರ ಹಲವು ಕವನ ಕಥೆ ಲೇಖನಗಳು ಕೆಲವು ಪತ್ರಿಕೆಗಳಲ್ಲಿ ಹಾಗೂ ಜಾಲತಾಣಗಳಲ್ಲಿ ಪ್ರಕಟವಾಗಿವೆ. ಸಾಹಿತ್ಯ ಕ್ಷೇತ್ರದಲ್ಲಿ ಹೆಚ್ಚಿನ ಮಾಹಿತಿ ಕಲೆ ಹಾಕಿ ಇನ್ನೂ ಕಥೆ-ಕವನಗಳನ್ನು ಬರೆಯಬೇಕೆಂಬ ಬಯಕೆ ಇವರದು

About the author

kavyakaaranji

View all posts

Leave a Reply

Your email address will not be published. Required fields are marked *